ಮುಹಮ್ಮದ್ ವಸೀಮ್ (ಜನನ ೧೨ ಫೆಬ್ರವರಿ ೧೯೯೬) ಒಬ್ಬ ಪಾಕಿಸ್ತಾನಿ ಮೂಲದ ಕ್ರಿಕೆಟಿಗ, ಇವರು ಸಂಯುಕ್ತ ಅರಬ್ ಸಂಸ್ಥಾನ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾರೆ. == ಅಂತರರಾಷ್ಟ್ರೀಯ ವೃತ್ತಿಜೀವನ == ಅಕ್ಟೋಬರ್ 2021 ರಲ್ಲಿ, 2021 ರ ಬೇಸಿಗೆ T20 ಬ್ಯಾಷ್ ಪಂದ್ಯಾವಳಿಗಾಗಿ ಯು.ಎ.ಇ ಯ ಟ್ವೆಂಟಿ೨೦ ಇಂಟರ್ನ್ಯಾಷನಲ್ (T20I) ತಂಡದಲ್ಲಿ ವಸೀಮ್ ಅವರನ್ನು ಹೆಸರಿಸಲಾಯಿತು. ಅವರು ನಮೀಬಿಯ ವಿರುದ್ಧ ಯು.ಎ.ಇ ಗಾಗಿ 5 ಅಕ್ಟೋಬರ್ 2021 ರಂದು ತಮ್ಮ T20I ಚೊಚ್ಚಲ ಪಂದ್ಯವನ್ನು ಮಾಡಿದರು. ಐದು ದಿನಗಳ ನಂತರ, ಐರ್ಲೆಂಡ್ ವಿರುದ್ಧದ ಯು.ಎ.ಇ ಪಂದ್ಯದಲ್ಲಿ, ವಸೀಮ್ T20I ಕ್ರಿಕೆಟ್‌ನಲ್ಲಿ ತನ್ನ ಮೊದಲ ಶತಕವನ್ನು ಗಳಿಸಿದರು, 62 ಎಸೆತಗಳಲ್ಲಿ 107 ಔಟಾಗದೆ. ನವೆಂಬರ್ 2021 ರಲ್ಲಿ, ಅವರು 2021 ನಮೀಬಿಯ ತ್ರಿ-ರಾಷ್ಟ್ರ ಸರಣಿಗಾಗಿ ಯು.ಎ.ಇ ಯ ಏಕದಿನ ಅಂತಾರಾಷ್ಟ್ರೀಯ () ತಂಡದಲ್ಲಿ ಹೆಸರಿಸಲ್ಪಟ್ಟರು. ಫೆಬ್ರವರಿ 2022 ರಲ್ಲಿ, ಓಮನ್ ವಿರುದ್ಧದ ಅವರ ಸರಣಿಗಾಗಿ ಯು.ಎ.ಇ ಯ ತಂಡದಲ್ಲಿಯೂ ಸಹ ಅವರನ್ನು ಹೆಸರಿಸಲಾಯಿತು. ಅವರು 5 ಫೆಬ್ರವರಿ 2022 ರಂದು ಒಮಾನ್ ವಿರುದ್ಧ ತಮ್ಮ ಚೊಚ್ಚಲ ಪಂದ್ಯವನ್ನು ಮಾಡಿದರು. ಮಾರ್ಚ್ 2023 ರಲ್ಲಿ ಸಿ.ಪಿ ರಿಜ್ವಾನ್ ಬದಲಿಗೆ ವಸೀಮ್ ಅವರನ್ನು ಯುಎಇ ನಾಯಕರನ್ನಾಗಿ ನೇಮಿಸಲಾಯಿತು. == ಉಲ್ಲೇಖಗಳು ==